ಮುಳುಗು

Pedro Novoa

Illustration by Andrea Popyordanova

ನೀನು ಧುಮುಕಿದೆ. ನೀರಿನಾಳಕ್ಕೆ ಇಳಿಯುತ್ತಿದ್ದಂತೆ ನಿನ್ನ ಅಜ್ಜಿ ಹಿರೋಮಿಯ ಮಾತುಗಳು ನಿನ್ನ ಕಿವಿಗಪ್ಪಳಿಸುತ್ತವೆ: “ನಮ್ಮ ಹಳೆಯ ದಾರಿಗಳ ಪಾಚಿಯನ್ನು ಹುಡುಕಿ ತಾ.” ಮೀನಿನ ಬೆಳಕಿನಂದದ ಕಳಚಿದ ಪೆÇರೆಗಳಂತೆ ಈ ಮಾತುಗಳು ಕೈಯಾರೆ ಮಾಡಿದ ನಿನ್ನ ಮುಖ ಮುಚ್ಚಿದ ಮುಸುಕಿನ ಸುತ್ತ ತೇಲತೊಡಗುತ್ತವೆ. ಆಧುನಿಕ ವೈದ್ಯಪದ್ಧತಿಯ ಬಗ್ಗೆ ನೀನಿಟ್ಟ ನಂಬಿಕೆ ಹುಸಿಯಾಗಿದೆ. ರಕ್ತಹೀನತೆಯ ಸಮಸ್ಯೆಗೆ ನಿನ್ನ ಅಣ್ಣ ಯೋಚಾನ್ ತೆಗೆದುಕೊಂಡ ಅಯೋಡಿನ್ ಮಾತ್ರೆಗಳು ಏನೂ ಪ್ರಭಾವ ಬೀರಲಿಲ್ಲ; ಇದರಿಂದ ಕೆಲವು ವಾರಗಳ ಕಾಲ ಅವನ ಕೆನ್ನೆಗಳಿಗೆ ಗುಲಾಬಿ ರಂಗೇರಿತು ಅಷ್ಟೆ.

ನಂತರದ್ದು ನಿನ್ನ ತರಬೇತಿಯ ಕತೆ: ಈಜು, ಹಂತಹಂತವಾಗಿ ಮುಳುಗುವುದು ಮತ್ತು ಇದಕ್ಕೆ ನಿನ್ನ ದೇಹ ಹೊಂದಿಕೊಳ್ಳುತ್ತಿದೆಯೇ ಎಂದು ನೋಡಲು ವೈದ್ಯಕೀಯ ಪರೀಕ್ಷೆಗಳು. ನಿನಗೆ ಖಾತ್ರಿ ಮಾಡಿಕೊಳ್ಳಬೇಕಿತ್ತು: ಅಮ್ಮ ಮಿಸುಕಿ ಸತ್ತಿದ್ದು ಆಕೆ ವಿಜ್ಞಾನದ ತಾಕತ್ತನ್ನು ಕಡೆಗಣಿಸಿ, ವಾಸ್ತವಕ್ಕಿಂತ ಪುರಾಣಗಳನ್ನು ಹೆಚ್ಚು ನಂಬಿದ್ದರಿಂದಾಗಿ. ಅಜ್ಜಿಯ ಪ್ರಕಾರ ಆಕೆಯ ಮಗಳು ಸತ್ತಿರಲ್ಲಿಲ್ಲ, ಆಕೆಯನ್ನು ಸಮುದ್ರ ಹಿಂದಕ್ಕೆ ಕರೆಸಿಕೊಂಡಿತ್ತು. ಯಾರೂ ಆಕೆಗೆ ಎದುರಾಡಲಿಲ್ಲ. ಹೆಣಕಾಯುವ ಹೊತ್ತಿಗೆ ಯಾರೂ ಗೋಳಾಡಲಿಲ್ಲ. ಅಪ್ಪ ಹೀಡಿಯೋ ಮಾತ್ರ ಬಚ್ಚಲು ಮನೆಯಲ್ಲಿ ಕೂತು, ಸಂಪ್ರದಾಯ ಮುರಿದು ಅತ್ತುಬಿಟ್ಟ. ಅಪ್ಪ ನಡೆದದ್ದೇ ದಾರಿ, ಹಾಡಿದ್ದೇ ಹಾಡು. ಗುರುತ್ವ ಬಲವು ನಮ್ಮನ್ನು ನೆಲದತ್ತ ಎಳೆಯುತ್ತಿದ್ದರೆ, ಆತ ಗಾಳಿಯಲ್ಲಿ ತೇಲುತ್ತಿದ್ದ. ಭೂಮಿ ಎಡಕ್ಕೆ ತಿರುಗಿದರೆ, ಅವನು ವಿರುದ್ಧ ದಿಕ್ಕಿನಲ್ಲಿ ಓಡುತ್ತಿದ್ದ. ಮುಂದೆ ಏನು ನಡೆಯಲಿಕ್ಕಿದೆ ಎಂಬುದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಒಣ ಹವೆಯು ನಿನ್ನ ಅಣ್ಣ ಯೋಚಾನ್ನ ಆರೋಗ್ಯವನ್ನು ಸುಧಾರಿಸಬಹುದು ಎಂಬ ಭರವಸೆಯಿಂದ ನಮ್ಮನ್ನು ಕೋಸಿಕಾಗೆ ಸ್ಥಳಾಂತರಿಸುವ ಬಗ್ಗೆ ಅವನ ಮನವೊಲಿಸಲು ವೈದ್ಯರಿಗೆ ಅವಕಾಶಮಾಡಿಕೊಟ್ಟ.

ಅಜ್ಜಿಗೆ ಈ ವಿಚಾರ ಗೊತ್ತಾದಾಗ, ಆಕೆ ಅಪ್ಪನನ್ನು ವಾರಸುದಾರಿಕೆಯಿಂದ ತೆಗೆದುಹಾಕಿ, ತನ್ನ ಗಂಟುಮೂಟೆ ಕಟ್ಟಿದಳು. “ನಾನು ನನ್ನ ಮನೆಗೆ ಹೊರಟುಹೋಗುತ್ತೇನೆ,” ಎಂದು ಹೇಳಿ ತನ್ನ ಎಂಬತ್ತು ವರ್ಷಗಳನ್ನು ಹೊತ್ತು ವಿಮಾನ ನಿಲ್ದಾಣಕ್ಕೆ ನಡೆದಳು; ಜಪಾನ್ಗೆ ಹೊರಟುಹೋದಳು. ಸ್ವಾಭಿಮಾನಿ ಹೆಂಗಸು ಆಕೆ. ವಿದ್ಯುತ್ತು, ಕಾರ್ಡ್ಗಳು ಅಥವಾ ಸೂಪರ್ ಮಾರ್ಕೆಟ್ಗಳಿಲ್ಲದ ಊರಲ್ಲಿ, ಕೇವಲ ಮೀನು ಅಥವ ಸಮುದ್ರದಿಂದ ತಾನೇ ಕಿತ್ತು ತಂದ ಪಾಚಿ ತಿನ್ನುತ್ತ ಒಂಟಿಯಾಗಿ ಬದುಕಿದಳು. “ಇಡೀ ಪೆಸಿಫಿûಕ್ ಮಹಾಸಾಗರವೇ ನನ್ನದಾಗಿತ್ತು,” ಎಂದು ಹಲವು ವರ್ಷಗಳ ನಂತರ ಆಕೆ ಹೇಳುವುದಿತ್ತು.

ಕೊಸಿಕಾದ ಹವೆ ಯೋಚಾನ್ನ ಆರೋಗ್ಯವನ್ನು ಉತ್ತಮಗೊಳಿಸುವುದರ ಬದಲಾಗಿ, ಮತ್ತಷ್ಟು ಹದಗೆಡಿಸುವುದನ್ನು ಕಂಡ ನಂತರ, ನಾವು ಕಲಾವೋಗೆ ಹಿಂದಿರುಗಿದೆವು. ಅಜ್ಜಿ ಮರಳಿ ಬರುವಂತೆ ಆಕೆಯ ಮನವೊಲಿಸಿದ್ದು ನೀನು. ಇದು ನಂಬಿಕೆದ್ರೋಹದ ಕಾಲವೂ ಆಗಿತ್ತು, ನೀನು ಮಾಡಿದ ನಂಬಿಕೆದ್ರೋಹ; ನೀನು ಕುಸ್ಕೋದಲ್ಲಿ ಒಳ್ಳೆಯ ಕೆಲಸ ಸಿಕ್ಕಿತೆಂದು ಅಲ್ಲಿಗೆ ಹೊರಟುಹೋದೆ ಆದರೆ ಅಜ್ಜಿಗೆ, “ಲಿಮಾದಲ್ಲಿದ್ದೇನೆ, ಮನೆಯಿಂದ ಒಂದೇ ಗಂಟೆ ದೂರ,” ಎಂದು ಹೇಳಿದೆ. ಅದಕ್ಕಾಗಿಯೇ ಯಾವಾಗೆಲ್ಲ ಕುಟುಂಬಸ್ಥರೆಲ್ಲ ಒಟ್ಟಾಗುವ ಸಂದರ್ಭ ಬರುತ್ತಿತ್ತೋ ಅಗೆಲ್ಲ ನೀನು ಕೊಡುತ್ತಿದ್ದ ಸಬೂಬುಗಳು ವಿಚಿತ್ರವಾಗಿರುತ್ತಿದ್ದವು. ನೀನು ಆಕೆಗೆ ಎಲ್ಲರಿಗಿಂತ ಹೆಚ್ಚಿನ ಮುದ್ದಿನವನಾಗಿದ್ದರಿಂದ–ಆಕೆ ಅದನ್ನು ಯಾವತ್ತೂ ಎಲ್ಲರೆದುರಿಗೆ ಒಪ್ಪಿಕೊಳ್ಳದಿದ್ದರೂ–ನೀನು ಹೇಳಿದ್ದೆಲ್ಲವನ್ನೂ, ಅದು ಎಷ್ಟೇ ವಿಚಿತ್ರವಾಗಿದ್ದರೂ ಮರುಮಾತಿಲ್ಲದೆ ಒಪ್ಪಿಕೊಂಡುಬಿಡುತ್ತಿದ್ದಳು. ಆದರೆ ಯೋಚಾನ್ನ ಆರೋಗ್ಯ ಪೂರ್ತಿ ಹದಗೆಟ್ಟಿದೆ ಮತ್ತು ವೈದ್ಯರು ಎಲ್ಲ ಭರವಸೆಯನ್ನು ಕೈಬಿಟ್ಟಿದ್ದಾರೆ ಎಂದು ನಿನಗೆ ಯಾವಾಗ ಆ ಒಂದು ದೂರವಾಣಿ ಕರೆಯ ಮೂಲಕ ತಿಳಿಯಿತೋ, ಆಗ ನೀನು ಸಿಕ್ಕಿದ ಮೊದಲ ವಿಮಾನ ಹತ್ತಿ ಲಿಮಾಗೆ ಹೊರಟುಹೋದೆ. ಅಲ್ಲಿ ವೈದ್ಯವಿಜ್ಞಾನ, ‘ನಿನ್ನ ಅಣ್ಣ ಸತ್ತೇ ಹೋಗುತ್ತಾನೆ,’ ಎಂದು ಘೋಷಿಸಿದಾಗ, ಅಜ್ಜಿ ಬಳಸುತ್ತಿದ್ದ ಪಾಚಿ ಹುಡುಕಿಕೊಂಡು ನೀನು ಸಮುದ್ರದಾಳಕ್ಕೆ ಇಳಿದಿದ್ದೆ.

ಯೋಚಾನ್ ಎಂಟು ವರ್ಷದವನಿದ್ದಾಗ, ಅಜ್ಜಿ ಸಮುದ್ರಕ್ಕಿಳಿದಿದ್ದಳು; ಹದಿನಾರಾದಾಗ ಅಮ್ಮ ಮಿಸುಕಿ, ಮತ್ತು ಈಗ, ಈ ತಲೆಮಾರಿನ ಜವಾಬ್ದಾರಿ ಇಪ್ಪತ್ತನಾಲ್ಕರ ನಿನ್ನ ಹೆಗಲಿಗೇರಿದೆ. ನಿನ್ನ ಅಣ್ಣನ ಹೆಂಡತಿ, ನಿನ್ನ ಬದಲಿಗೆ ತಾನು ಹೋಗುವುದಾಗಿ ಹೇಳಿದಳು. ಆದರೆ ಅದು ಅವಳ ರಕ್ತದಲ್ಲಿ ಇರಲಿಲ್ಲ. ನಮ್ಮ ಕುಟುಂಬದ ಹೆಂಗಸರು ಸಾವಿರಾರು ವರ್ಷಗಳಿಂದ ಸಿಂಪಿ ಮತ್ತು ಮುತ್ತುಗಳನ್ನು ಹುಡುಕುತ್ತ ಸಮುದ್ರಕ್ಕಿಳಿದಿದ್ದಾರೆ. ನಿನ್ನ ಸೊಂಟದ ಸುತ್ತ ಕಟ್ಟಿದ ಹಗ್ಗವನ್ನು ಈಗ ಅದೆಷ್ಟು ದುಗುಡದಿಂದ ಅವಳು ಹಿಡಿದುಕೊಂಡಿದ್ದಾಳೋ ಅಷ್ಟೇ ದುಗುಡದಿಂದ ಆಕೆ ನಿನ್ನ ನಂಬರನ್ನು ಒತ್ತಿದ್ದಳು. ದೋಣಿಯಲ್ಲಿ ಕುಳಿತಿದ್ದ ನಿನ್ನ ಅತ್ತಿಗೆ ಬೆವರುತ್ತಿದ್ದಳು, ಸಂಕಟದಿಂದ; ನೀರಿನೊಳಗಿದ್ದ ನಿನ್ನ ದೇಹ ಒಂದರ್ಥದಲ್ಲಿ ಅವಳ ದೇಹವೇ ಆಗಿತ್ತು.

ಮತ್ತೆ ನೀನು, ಬಾಯಿಯಿಂದ ಹೊರಚಾಚಿದ ಕೊಂಬಿನಂತಹ ಉಸಿರುಕೊಳವೆಯನ್ನು ಕಟ್ಟಿಕೊಂಡು, ಮುಖ ಕೆಳಗೆ ಮಾಡಿ ಕಪ್ಪುಹಾಲಿನ ಲೋಕದೊಳಗಿಳಿಯುತ್ತಿದ್ದೆ. ಕಂದೀಲಿನ ಯಾತನಾಮಯ ಬೆಳಕು ಕಡಲಾಳದ ರಾತ್ರಿ ಹೊರಗಿನ ರಾತ್ರಿಗಿಂತ ಹೆಚ್ಚು ಗಾಢವಾದುದು ಎಂದು ಸಾಬೀತುಪಡಿಸುವಂತೆ ನಿನ್ನ ಮುಳುಗುವಿಕೆಗೆ ಒಂದು ಚೌಕಟ್ಟು ಒದಗಿಸಿತ್ತು. ಕಾಲಿಗೆ ಕಟ್ಟುವ ಈಜುರೆಕ್ಕೆ, ಈಜುಡುಗೆ ಇಲ್ಲದೆ, ಬರಿ ಎದೆಯಲ್ಲಿ, ಕೇವಲ ಒಳಉಡುಪಿನಲ್ಲಿದ್ದ ನೀನು ಹೊರಟೆ, ಅನಂತದೆಡೆಗೆ, ಪಾಚಿ ಪ್ರಪಂಚಕ್ಕೆ, ಹಳದಿ -ಕಂದು ಬಣ್ಣದ ಎಲ್ಲರಿಗೂ ಚಿರಪರಿಚಿತ ¥sóÀÅಕಸ್ ಪಾಚಿಯನ್ನು ನೀನು ತರಬೇಕಾಗಿತ್ತು. ಈ ಪಾಚಿಯನ್ನು ನಿನ್ನ ಪೂರ್ವಜರಾದ ಆಮಗಳು-ಅವರು ಪ್ರಾಚೀನ ಮುತ್ತುಮುಳುಕರು-ದುರ್ಬಲತೆಯ ದೆವ್ವಗಳನ್ನು ದೂರವಿರಿಸಲು ಹಸಿಯಾಗಿಯೇ ತಿನ್ನುತ್ತಿದ್ದರು. ಆದರೆ ಇಲ್ಲಿ ಎದುರಾಗುವ ಸಮಸ್ಯೆ ಎಂದರೆ, ಈ ಪಾಚಿಗಳು ತಮ್ಮ ವಸಾಹತನ್ನು ಕಟ್ಟುತ್ತಿದ್ದುದು ಸಮುದ್ರದಾಳದ ಕಡಿದಾದ ಬಂಡೆಗಳ ಕೊರಕಲುಗಳ, ತಲುಪಲು ದುಸ್ಸಾಧ್ಯವಾದ ಆಳಗಳಲ್ಲಿ. ಈಗ, ಮೂವತ್ತು ಮೀಟರು ಕೆಳಗೆ ನಿನಗೆ ಈ ಕೊರಕಲುಗಳ ಚೂಪಿನ ಸ್ಪರ್ಶದ ಅನುಭವವಾಗಿದೆ.

ಪ್ಲವಕ ಮತ್ತು ಚಿಪ್ಪು ವಸಾಹತುಗಳ ಹೊದರುಗಳನ್ನು ನೀನು ಎಚ್ಚರದಿಂದ ಹಾದುಹೋದೆ. ಕೊನೆಗೂ ¥sóÀÅಕಸ್ ಪಾಚಿಯ ಉಬ್ಬಿದ ಪೆÇಟರೆಗಳು ನಿನ್ನ ಕೈ ಮತ್ತು ತೋಳುಗಳನ್ನು ಸ್ಪರ್ಶಿಸುವ, ನಿನ್ನ ಎದೆಯ ಸೀಮಾರೇಖೆಗಳನ್ನು ಬಿಡಿಸುತ್ತಿರುವ ಅನುಭವ ನಿನಗಾಯಿತು. ನಿನ್ನ ಬಳಿಯಿದ್ದ ಬಲೆಯಲ್ಲಿ ಎಷ್ಟು ತುಂಬಬಹುದೋ ಅಷ್ಟು ಪಾಚಿಯನ್ನು ನೀನು ಕಿತ್ತುಕೊಂಡೆ. ನೀರಿಗಿಳಿದ ಕೆಲಸವಾಯಿತು; ಇಲ್ಲಿಗೆ ಅರ್ಧ ಯುದ್ಧ ಗೆದ್ದಂತೆ.

ನೀನು ಒಂದೂವರೆ ನಿಮಿಷ ಉಸಿರಾಡಿರಲಿಲ್ಲ: ಈ ಒಂದೂವರೆ ನಿಮಿಷ ಅನ್ನುವುದು ನೀರೊಳಗೆ ಒಂದು ಯುಗದಂತೆ. ಕೆಲವೊಮ್ಮೆ ನಿನಗೆ ನಿನ್ನ ನಾಲಗೆಯು ಉದ್ದ ಬೆಳೆಯುತ್ತಿದೆ, ತಿರುಚುತ್ತಿದೆ, ಹಿಂದಕ್ಕೆ ಮಗುಚಿಕೊಳ್ಳುತ್ತಿದೆ ಎಂದೆನಿಸಿದ್ದುಂಟು: ಹಿಂದಕ್ಕೆ ಬರಬೇಕಾದ ವೇಗವನ್ನು ಸರಿಯಾಗಿ ಗ್ರಹಿಸಲಾಗದೆ ನಿನ್ನ ತಾಯಿ ಸತ್ತಿದ್ದು ಹಾಗೇ. ನೀನೂ ಹಾಗೆಯೇ ಸಾಯಬಹುದು. ಇಂಗಾಲದ ಡೈ ಆಕ್ಸೈಡ್ ನಿನ್ನ ಪುಪ್ಪುಸಗಳನ್ನು ಜಡಗಟ್ಟಿಸದಂತೆ ನೀನು ಸಾವಧಾನವಾಗಿ ಚಲಿಸಿದೆ. ನಿನ್ನ ಕೈಗಳು ನಿನ್ನ ತೊಡೆಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದವು; ಮೇಲೇರಲು ಎಷ್ಟು ಬೇಕೋ ಅಷ್ಟೇ ಬಲ ಹಾಕಿ ನೀನು ಕಾಲು ಜಾಡಿಸಿದೆ. ಆದರೆ, ಕಾಲಿಗೆ ಸಿಕ್ಕಿಕೊಂಡ ಒಂದು ಗಂಟು ನಿನ್ನ ಯೋಜನೆಯನ್ನೇ ಬದಲಾಯಿಸಿತು. ನೀನು ಇಳಿಬಿಟ್ಟ ಹಗ್ಗಕ್ಕೆ ನೀನೇ ಸಿಕ್ಕಿಹಾಕಿಕೊಂಡೆ.

“ಸಮುದ್ರಕ್ಕೆ ಅಂಜಬೇಡ. ನಿನ್ನಾಳದ ಪ್ರೀತಿಗಾಗಿ ಹೋರಾಡಲು ಹಿಂಜರಿಯಬೇಡ,” ಅಜ್ಜಿ ಹೇಳುತ್ತಿದ್ದಳು. ನಿನ್ನ ಮುಖಕವಚದ ಮುಂದಿನ ಅಲ್ಪಸ್ವಲ್ಪ ಬೆಳಕನ್ನೂ ಮೀನು ನುಂಗಿಹಾಕುತ್ತಿತ್ತು. ನಿನ್ನ ಅತ್ತಿಗೆ ಹತಾಶಳಾಗಿ ಮೇಲಿನಿಂದ ಹಗ್ಗವನ್ನು ಎಳೆಯುತ್ತಿದ್ದಳು. ಅದು ನಿಶ್ಯಕ್ತವಾಗಿ ಜೋತುಬಿದ್ದುದನ್ನು, ನಂತರ ತುಂಡಾಗಿದ್ದನ್ನು ಕಂಡ ಅವಳು ತತ್ತರಿಸಿದಳು.

ನಿನ್ನ ಪುಪ್ಪುಸಗಳು ಎದುರಿಸಿದ ಅಜ್ಞಾತ ಹೊಡೆತಗಳಿಂದ ತತ್ತರಿಸಿದ ನಿನ್ನ ತಲೆಯು ಸುತ್ತತೊಡಗಿ ನೀನು ಈ ಪ್ರಪಂಚದಿಂದ ನಿದ್ರೆಯೆಡೆಗೆ ಜಾರುತ್ತಿದ್ದಿ ಅನ್ನುವಷ್ಟರಲ್ಲಿ, ನಿನಗೆ ಸಿಕ್ಕಿಹಾಕಿಕೊಂಡ ಗಂಟು ಬಿಚ್ಚಿ, ಸೊಂಟಕ್ಕೆ ಕಟ್ಟಿದ ಹಗ್ಗ ಕಳಚಿ, ನೀನು ಸಹಜ ಪ್ರವೃತ್ತಿಯಿಂದ ಮೇಲೇರಿಬಿಟ್ಟೆ. ನಿನ್ನ ಹಿಂದಿರುಗುವಿಕೆ ನಿಧಾನವಾದರೂ ದೃಢವಾಗಿತ್ತು, ಸಮುದ್ರದ ಮೇಲ್ಮೈಯಿಂದ ಐದು ಮೀಟರ್ನಷ್ಟು ಕೆಳಗಿದ್ದಾಗ ನಿನಗೆ ಕಂಡ ದೋಣಿಯ ಅಡಿಮರ ಇನ್ನಷ್ಟು ಸ್ಪಷ್ಟವಾಗತೊಡಗಿತು. ಅಂಕುಡೊಂಕಾಗಿ ಹರಡಿಕೊಂಡ ಎಣ್ಣೆಯ ತೊಟ್ಟುಗಳಂತೆ ನಿನ್ನ ಜೀವನದ ತುಣುಕುಗಳು ತೇಲಾಡುವುದು ನಿನಗೆ ಕಾಣಿಸತೊಡಗಿತು; "ಅಪ್ಪನ ಬಳುವಳಿಯಾದ ಯೋಚಾನ್ನ ಗುಲಾಬಿ ಕೆನ್ನೆಗಳು, ಮೊದಲ ಬಾರಿಗೆ ಮುತ್ತು ಕಂಡಾಗ ಅಮ್ಮನ ಮುಖದ ಮೇಲರಳಿದ ನಗು, ಮತ್ತು ಎಲ್ಲವನ್ನೂ ತಿದ್ದುತ್ತಿದ್ದ ಅಜ್ಜಿಯ ಕಟ್ಟುನಿಟ್ಟಿನ ದನಿ. ಆ ಕ್ಷಣದಲ್ಲಿ ನಿನ್ನ ಕೈಗಳು ಜಡಗಟ್ಟುತ್ತವೆ; ನಿನ್ನ ನಾಲಗೆ ನಿನ್ನ ಅಂಗುಲಿಗೆ ಅಡ್ಡಲಾಗಿ ಕೂತಿರುವ ದೊಡ್ಡ ಹಾವಿನಂತಾಗುತ್ತದೆ. ಬೆಳಕು ಬೇರೆಯೇ ತೆರನಾದ ಬೆಳಕಾಗಿದೆ; ಶುಭ್ರವೂ ಮತ್ತು ಉಗ್ರವೂ. ನೀನು ಕನಸು ಕಾಣಲು ತೊಡಗುತ್ತಿ. ನಿನ್ನ ಕನಸಿನಲ್ಲಿ ನಿನ್ನ ಕಾಲುಗಳಿಗೆ ಈಜುರೆಕ್ಕೆಗಳು ಹುಟ್ಟಿಕೊಳ್ಳುತ್ತವೆ ಮತ್ತು ಆಮ್ಲಜನಕ ಎನ್ನುವುದು ಕೇವಲ ಒಂದು ಮೂಢನಂಬಿಕೆ ಮಾತ್ರ.